ಪ್ರೇರಣಾ ಮಕ್ಕಳ ಆರೈಕೆ ಕೇಂದ್ರ

ವೈದ್ಯಕೀಯ ಬೆಂಬಲ
ಮಕ್ಕಳಿಗೆ ನಿರಂತರ ವೈಧ್ಯಕೀಯ ಚಿಕಿತ್ಸೆ ಹಾಗೂ ಅಗತ್ಯ ಔಷಧಿ ಮತ್ತು ಮಾತ್ರೆಗಳನ್ನು ಪೂರೈಸುತ್ತದೆ.ಹಾಗು ಮಕ್ಕಳ ಆರೋಗ್ಯದ ಮೇಲೆ ನಿರಂತರ ನಿಗವಹಿಸಲಾಗುತ್ತದೆ.ಮಕ್ಕಳ ವೈದ್ಯಾಧಿಕಾರಿಗಳು ಹಾಗು ಸ್ಟಾಫ್ ನರ್ಸ್ ಗಳು ನಿರಂತರವಾಗಿ ಮಕ್ಕಳ ಅರೋಗ್ಯ ತಪಾಸಣೆ ಮಾಡುತ್ತಿರುತ್ತಾರೆ. ಮತ್ತು ಔಷಧಿ ಮತ್ತು ಮಾತ್ರೆಗಳ ದಾಸ್ತಾನು ಒಳಗೊಂಡುತ್ತದೆ

 

 

ಶಿಕ್ಷಣ
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯುವಂತೆ ಮಾಡುವುದೇ ನಮ್ಮ ಮೊದಲ ಆದ್ಯತೆ ಮತ್ತು ಅರ್ಥ ಪೂರ್ಣ ಶಿಕ್ಷಣ ದೊರೆತರೆ ಪ್ರತಿ ಮಗುವೋ ಉನ್ನತ ಹಂತ ಮತ್ತು ಪ್ರಭುದ್ದತೆ ಪಡೆಯುವ ಕನಸು ಸಾಕಾರಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಣದ ಹಕ್ಕು ಪ್ರತಿಯೊಂದು ಮಗುವಿಗೋ ಒಂದು ಅಸ್ತ್ರವಾಗಿ ಪರಿಣಮಿಸಿದೆ.
ನಮ್ಮಲ್ಲಿ ದಾಖಲಾಗುವ ಪ್ರತಿ ಮಗುವನ್ನು ಹತ್ತಿರದ ಸರ್ಕಾರಿ ಅಥವಾ ಸರ್ಕಾರದ ಅನುದಾನಕ್ಕೆ ಒಳಪಟ್ಟ ಶಾಲೆಗಳಿಗೆ ದಾಖಲು ಮಾಡಲಾಗುತ್ತದೆ ಹಾಗು ಮಕ್ಕಳಿಗೆ ಬೇಕಾದ ಶಾಲಾ ಬ್ಯಾಗ್ ನೋಟ್ ಪುಸ್ತಕ ಶಾಲಾ ಸಮವಸ್ತ್ರ ಇತ್ಯಾದಿಗಳನ್ನೂ ಸಂಪೂರ್ಣವಾಗಿ ಸಂಸ್ಥೆ ನೋಡಿಕೊಳ್ಳುತ್ತದೆ

ಕೌಶಲ್ಯಾಭಿವೃದ್ಧಿ
ಸಂಸ್ಥೆಯ ಮಕ್ಕಳು ಎಸ್ .ಎಸ್ .ಎಲ್ .ಸಿ ಪರೀಕ್ಷೆ ಮುಗಿದ ನಂತರ ಮೊದಲ ಆದ್ಯತೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಅನುವು ಮಾಡಿಕೊಡಲಾಗುತ್ತದೆ.
ಯುವ ಸಮುದಾಯ ಸ್ವಂತ ಉದ್ಯೋಗದ ಮೇಲೆ ಭರವಸೆಯಿತ್ತು ಅದರ ಮೇಲೆ ಹೆಚ್ಚಿನ ಗಮನ ನೀಡಿದ್ದಲ್ಲಿ ಸ್ವತಂತ್ರರಾಗಿ ಜೀವನ ನಡೆಸಬಹುದು ಮತ್ತು ಪ್ರಗತಿ ಸಾಧ್ಯವಾಗುತ್ತದೆ

ಪೌಷ್ಟಿಕಯುಕ್ತ ಆಹಾರ ಮತ್ತು ನ್ಯೂಟ್ರಿಷನ್ ಪೂರೈಕೆ

ಸಂಸ್ಥೆಯಲ್ಲಿರುವ ಪ್ರತಿ ಮಗುವಿಗೂ ಪೌಷ್ಟಿಕಯುಕ್ತ ಆಹಾರವನ್ನೇ ನೀಡಲಾಗುತ್ತದೆ ಮತ್ತು ನ್ಯೂಟ್ರಿಷನ್ ಗೆ ಸಂಬಂಧಿಸಿದಂತೆ ಹೆಚ್ಚು ಗಮನ ಕೊಡಲಾಗದೆ.ಪ್ರತಿ ಮಗುವಿಗೆ ನೀಡುವ ಅಹಾರವನ್ನು ವೈದ್ಯಾಧಿಕಾರಿಗಳ ಶಿಫಾರಸ್ಸಿನ ಮೇಲೆ ನಿರ್ಧರಿಸಿ ನೀಡಲಾಗುತ್ತದೆ