ಸಂಸ್ಥಾಪಕರು

ಶಿವಕುಮಾರ್ ಮೇಗಳಮನೆ ಅವರ ಈ ಸಮಾಜ ಮುಖಿ ಪ್ರಯಾಣ 2015 ರಲ್ಲಿ ಪ್ರಾರಂಭವಾಯಿತು. ಮೂಲತಃ ಖಾಸಗಿ ಕಂಪನಿಯೊಂದರಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿವಕುಮಾರ್ ಮೇಗಳ ಮನೆ ಸಮಯದಲ್ಲಿ ಅವರು ಕೆಲವು ಆಪ್ತ ಸ್ನೇಹಿತರು ಸೇರಿಕೊಂಡು ತಮ್ಮ ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಒಳಿತಿಗೆ ವಿನಿಯೋಗಿಸಲು ತೀರ್ಮಾನಿಸಿ ಅದರಂತೆ ಪ್ರತಿ ತಿಂಗಳು ಹಣ ಸಂಗ್ರಹಿಸಿ ಹತ್ತಿರದ ಅನಾಥಾಶ್ರಮ ಅಥವಾ ವೃದ್ಧ ಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ಅವಶ್ಯಕತೆ ಗೆ ಹಣವನ್ನು ದೇಣಿಗೆ ನೀಡುತ್ತಿದ್ದರು ..ಹೀಗೆ ಒಮ್ಮೆ 2019 ರಲ್ಲಿ ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾದ ಹೆಚ್.ಐ .ವಿ ಸೋಂಕಿತ ಮಕ್ಕಳ ಕಾರ್ಯಕ್ರಮ ನೋಡಿ ತುಂಬಾ ಭಾವುಕರಾದರು ಅದನ್ನು ಅಲ್ಲಿಗೆ ಬಿಡದೆ ಟಿವಿಯಲ್ಲಿ ಪ್ರಸಾರವಾದ ಸಂಸ್ಥೆಯ ವಿವರ ಪಡೆದು ಅಲ್ಲಿಗೆ ಭೇಟಿ ನೀಡಿ ಹೆಚ್.ಐ .ವಿ ಸೋಂಕಿತ ಮಕ್ಕಳೊಂದಿಗೆ ಹಾಗು ಅದನ್ನು ನಡೆಸುತ್ತಿರುವವರಿಂದ ಮಾಹಿತಿ ಸಂಗ್ರಹಿಸಿ .ಈ ತರದ ಸೋಂಕಿತರಿಗೆ ತಾವು ಬೆನ್ನೆಲುಬಾಗಿ ನಿಲ್ಲಬೇಕು ಅವರಿಗಾಗಿ ಒಂದು ಸಂಸ್ಥೆ ಕಟ್ಟಬೇಕು ಅಂದು ಆಲೋಚಿಸಿ ಅದರಂತೇ 2019 ರಲ್ಲಿ ವಿಬಿಪಿ ಫೌಂಡೇಶನ್ ಪ್ರಾರಂಭಿಸದರು.ಆರಂಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ ಶಿವಕುಮಾರ ಮೇಗಳ ಮನೆ ದೃತಿಗೆಡದೆ ತಮ್ಮ ಸೇವಾ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ.ಇದರ ಫಲವಾಗಿ ಸೋಂಕಿತ ಹಾಗು ಬಾಧಿತ ಮಕ್ಕಳು ಮತ್ತು ಹಿಂದುಳಿದ ಮಕ್ಕಳು ಉತ್ತಮ ಆರೈಕೆ ಪಾಲನೆ ಮತ್ತು ಪೋಷಣೆಯನ್ನು ಪಡೆಯುತ್ತಿದ್ದಾರೆ.

ಇಂತಹ ಸೋಂಕಿತ /ಬಾಧಿತ ಮತ್ತು ಹಿಂದುಳಿದ ಮಕ್ಕಳ ಆರೈಕೆಯೇ ಒಂದು ಚಾಲೆಂಜ್ ,ಅರಂಭದಲ್ಲಿ ಕುಟುಂಬದಲ್ಲಿ ವಿರೋಧವನ್ನು ಎದುರಿಸಿದರು ಹಾಗೆ ಆಪ್ತ ಸ್ನೇಹಿತರು ಏಡ್ಸ ಮಕ್ಕಳಿಗೆ ಕೆಲಸ ಮಾಡುತ್ತಿದ್ದಾನೆ ಎಲ್ಲಿ ತಮಗೂ ಕೂಡ ಈ ರೋಗ ಬರುತ್ತದೆ ಎಂದು ತಿಳಿದು ಸ್ನೇಹಿತರು ದೂರವಾದರು ಹೀಗೆ ಎಲ್ಲರಿಂದ ದೂರ ಉಳಿದ ಶಿವಕುಮಾರ್ ಸ್ವಂತ ಮಗುವನ್ನು ನೋಡಲು ಆಗದೆ ತನ್ನ ಮಗನಿಗೆ ನೀಡುವ ಪ್ರೀತಿಯನ್ನು ತನ್ನ ಸಂಸ್ಥೆಯಲ್ಲಿರುವ ಮಕ್ಕಳಿಗೆ ನೀಡುವ ಮೂಲಕ ಅನಾಥ ಹಾಗು ನಿರ್ಲಕ್ಷಕ್ಕೆ ಒಳಪಟ್ಟ ಮಕ್ಕಳಿಗೆ ಬೆಳಕಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ.